ಚಿತ್ರ ಕಲೆ ಗ್ರೇಡ್ ಪರೀಕ್ಷೆಯಲ್ಲಿ 100% ಫಲಿತಾಂಶ

ತಾಲೂಕಿಗೆ ಪ್ರಥಮ, ದ್ವಿತೀಯ ಸ್ಥಾನ ಪಡೆದ ಶಾಲಾ ವಿದ್ಯಾರ್ಥಿಗಳು

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯವರು 2017-18 ರ ಸಾಲಿನಲ್ಲಿ ನಡೆಸಿದ ಚಿತ್ರಕಲೆ ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಿಂದ ಲೋವರ್‌ಗ್ರೇಡ್‌ನಲ್ಲಿ 18 ಮಕ್ಕಳು ಹಾಜರಾಗಿದ್ದಾರೆ 9 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಮತ್ತು 9 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಹೈಯರ್ ಗ್ರೇಡ್ ವಿಭಾಗದಲ್ಲಿ 18 ಮಕ್ಕಳು ಹಾಜರಾಗಿ 2 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿ ತಾಲೂಕಿಗೆ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. 14 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಇವರಿಗೆ ಶಾಲಾ ಚಿತ್ರಕಲಾ ಶಿಕ್ಷಕರಾದ ರುಕ್ಮಯ ಬಿ. ಇವರು ತರಬೇತಿ ನೀಡಿರುತ್ತಾರೆ.

ಹೈಯರ್ ಗ್ರೇಡ್ ವಿಭಾಗದಲ್ಲಿ ಡಿಸ್ಟಿಂಕ್ಷನ್ ಪಡೆದವರು:
ಗೌತಮ್ ಎಸ್. (ಗಣೇಶ್ ಪೂಜಾರಿ, ಮಮತಾ ದಂಪತಿಗಳ ಪುತ್ರ) ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ರಂಗಪ್ಪಕಲಾದಗಿ- ಸಹಶಿಕ್ಷಕ- (ಬಸಪ್ಪ, ಗೌರವ್ವ ದಂಪತಿಗಳ ಪುತ್ರ) ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಜನನಿ ಬಿ. (ಕೃಷ್ಣ ಗೌಡ, ಸುಶೀಲಾ ದಂಪತಿಗಳ ಪುತ್ರಿ)
ಅಂಕಿತ್ (ಅಮ್ಮಾಜಿ ಮೂಲ್ಯ, ಪುಷ್ಫಲತಾ ದಂಪತಿಗಳ ಪುತ್ರ)

kannada-medium-higher-grade

ಲೋವರ್‌ಗ್ರೇಡ್ ವಿಭಾಗದಲ್ಲಿ ಡಿಸ್ಟಿಂಕ್ಷನ್ ಪಡೆದವರು:
ಧನುಷ್ ಬಿ.ವಿ ಅಮೀನ್ (ವಾಸಪ್ಪ ಪೂಜಾರಿ, ಗೀತಾ ದಂಪತಿಗಳ ಪುತ್ರ), ಚರಣ್ (ಮಾಧವ, ನಾಗವೇಣಿ ದಂಪತಿಗಳ ಪುತ್ರ), ಸಂಜನಾ ಎಸ್.ಎನ್.(ಸಾಂತಪ್ಪ, ನಳಿನಾವತಿ ಬಿ. ದಂಪತಿಗಳ ಪುತ್ರಿ), ಶ್ರದ್ದಾ ರೈ ಎಸ್. (ಪ್ರಭಾತ್‌ ಕುಮಾರ್‌ ರೈ, ಸವಿತಾ ಪಿ. ರೈ ದಂಪತಿಗಳ ಪುತ್ರಿ), ಪ್ರೀತೇಶ್‌ ಕುಮಾರ್ (ತಿಮ್ಮಪ್ಪ ಎಂ., ಮಂಜುಳ ದಂಪತಿಗಳ ಪುತ್ರ), ಶಿಶಿರ್ ಎಸ್. (ಸುಂದರ್ ಪೂಜಾರಿ ಮತ್ತು ಮಮತ ಸಿ. ದಂಪತಿಗಳ ಪುತ್ರ), ಹೇಮಶ್ರೀ ಯು (ಪುರುಷೋತ್ತಮ ಗೌಡ ಮತ್ತು ಕಮಲಾಕ್ಷಿ ದಂಪತಿಗಳ ಪುತ್ರಿ), ವಿಜೇತ್‌ ಕೆ.ಎಸ್. (ಕೃಷ್ಣಪ್ಪಗೌಡ ಎಸ್.ಬಿ. ಮತ್ತು ಶೋಭ ದಂಪತಿಗಳ ಪುತ್ರ), ಅನಘಾ ಭಟ್ (ಸುಬಣ್ಣ ಭಟ್ ಮತ್ತು ಸಂಧ್ಯಾ ಎಸ್. ಭಟ್ ದಂಪತಿಗಳ ಪುತ್ರಿ)

lower-grade

Highslide for Wordpress Plugin