ಗ್ರಾಮವಿಕಾಸ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು

ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ನಡೆಸಲ್ಪಡುವ ‘ಗ್ರಾಮದ ಸಮಗ್ರ ವಿಕಾಸ’ ಎಂಬ ಚಟುವಟಿಕೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ನೀಡಲಾದ ’ಕೆದಿಲ’ ಗ್ರಾಮಕ್ಕೆ ಶಾಲೆಯ ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿ ಸದಸ್ಯರು ಹಾಗೂ ಶಿಕ್ಷಕರು 30-12-2017 ರ ಶನಿವಾರದಂದು ತೆರಳಿ ಕೆದಿಲದ ’ಶ್ರೀರಾಮ ಭಜನಾ ಮಂದಿರ’ ಇಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು.

Grama vikas

Grama vikas (2)

Grama vikas (1)

ಈ ಸ್ವಚ್ಛತಾ ಅಭಿಯಾನದಲ್ಲಿ ಊರ ಅನೇಕ ಮಹನೀಯರು, ಹಾಗೂ ವಿವೇಕಾನಂದಕನ್ನಡ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಶ್ರೀ ಅಚ್ಯುತ್ ನಾಯಕ್, ಸಂಚಾಲಕರಾದ ಶ್ರೀ ವಿನೋದ್‌ಕುಮಾರ್‌ ರೈ ಗುತ್ತು, ಸದಸ್ಯರಾದ ಶ್ರೀ ರಮೇಶ್ಚಂದ್ರ ಎಸ್, ಹಾಗೂ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಸಂ ಚಾಲಕರಾದ ಶ್ರೀ ಮುರಳಿಧರ ಪಾಲ್ಗೊಂಡರು.

ಶ್ರೀ ರಾಮ ಭಜನಾ ಮಂದಿರದ ಒಳಗಿನ ಆವರಣ ಹಾಗೂ ಸುತ್ತಮುತ್ತ ದಿನಪೂರ್ತಿ ಸ್ವಚ್ಛಗೊಳಿಸುವಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಂಡರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶಯದಂತೆ ಕೆದಿಲಗ್ರಾಮದ ವಿಕಾಸದ ಬಗೆಗೆ ಕಾಳಜಿಯನ್ನು ಪಡೆದುಕೊಂಡರು. ಊರವರ ವತಿಯಿಂದ ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಮರಣಿಕೆಯನ್ನು ಶ್ರೀರಾಮ ಭಜನಾ ಮಂಡಳಿಯ ವತಿಯಿಂದ ನೀಡಲಾಯಿತು.

Highslide for Wordpress Plugin