ಕನ್ನಡ ಭಾಷಾ ಕಲಿಕೆಯ ಮೂಲಕ ನಾಡ ಸಂಸ್ಕೃತಿಯ ಹರಿಕಾರರಾಗಿ – ಸಂಜೀವ ಮಠಂದೂರು

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 2018-19 ನೇ ಸಾಲಿನ ಶೈಕ್ಷಣಿಕ ವರ್ಷವು ವಿದ್ಯಾಧಿಪತಿಯೂ, ವಿಘ್ನ ನಿವಾರಕನೂ ಆದ ಗಣಪತಿಗೆ ಗಣಹೋಮ ಸೇವೆ ಸಲ್ಲಿಸುವ ಮೂಲಕ ಪ್ರಾರಂಭವಾಯಿತು.

ನಂತರದಲ್ಲಿ ಹೊಸದಾಗಿ ದಾಖಲೆಗೊಂಡಂತಹ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮವು ನಡೆಯಿತು. ಆ ಸಂದರ್ಭದಲ್ಲಿ ಅಭ್ಯಾಗತರಾಗಿ ಆಗಮಿಸಿದ್ದ ಪುತ್ತೂರಿನ ನೂತನ ಶಾಸಕರಾದ ಶ್ರೀಯುತ ಸಂಜೀವ ಮಠಂದೂರುರವರು ಮಾತನಾಡಿ ಮಾತೃಭಾಷೆಯ ಕಲಿಕೆಯು ದೇಶದ ಬಗ್ಗೆ ಅಭಿಮಾನ ಬರುವಂತಹ ಸಂಸ್ಕಾರಯುತರನ್ನು ರೂಪಿಸುತ್ತದೆ ಎಂದರು.

praveshotsava (2)

praveshotsava (3)

praveshotsava (4)

praveshotsava

praveshotsava (1)

ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಅಚ್ಯುತ್ ನಾಯಕ್, ಸಂಚಾಲಕರಾದ ವಿನೋದ್‌ ಕುಮಾರ್‌ರೈ ಗುತ್ತು ಬೆಟ್ಟಂಪಾಡಿಯವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಹಿರಿಯರು, ಮಾರ್ಗದರ್ಶಕರೂ ಆದ ಶ್ರೀಯುತ ಭಿರ್ಮಣ್ಣಗೌಡ, ವಿವೇಕಾನಂದ ವಿದ್ಯಾಸಂಸ್ಥೆಗಳ ನಿರ್ದೇಶಕರೂ ಆದ ಶ್ರೀ ಶಿವಪ್ರಸಾದ್, ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ ವೃಂದ ಹಾಗೂ ಪೋಷಕರು ಉಪಸ್ಥಿತರಿದ್ದರು.

ಹೊಸ ವಿದ್ಯಾರ್ಥಿಗಳನ್ನು ಘೋಷ್‌ನ ಮೂಲಕ ಶಾಲಾ ಪ್ರವೇಶದ್ವಾರದದಿಂದ ಸ್ವಾಗತಿಸಲಾಯಿತು. ಮಕ್ಕಳ ವಿದ್ಯಾಜೀವನವು ಸದಾ ಸುಗಮವಾಗಿ ಸಾಗಲಿ ಎಂದು ಹಾರೈಸುತ್ತಾ ಮಾತಾಜಿಯವರು ಸಾಮೂಹಿಕ ಆರತಿ ಬೆಳಗಿ ತಿಲಕಧಾರಣೆ ಮಾಡಿದರು.ತದನಂತರ ವಿದ್ಯಾರ್ಥಿಗಳು ಶಾರದಾ ಮಾತೆಗೆ ಪುಷ್ಫಾರ್ಚನೆ ಮಾಡಿ ತಾಯಿಯ ಅನುಗ್ರಹವನ್ನು ಬೇಡಿದರು.  ಶ್ರೀಮತಿ ಅನುಷಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin