ಅಭಿವ್ಯಕ್ತಿ ಮಂಟಪ – ರಜಾ ಮಜಾ ಬೇಸಿಗೆ ಶಿಬಿರದ ಸಮಾರೋಪ

ದಿನಾಂಕ 22-03-2018 ರಿಂದ  31-03-2018 ರವರೆಗೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಅಭಿವ್ಯಕ್ತಿ ಮಂಟಪ-ರಜಾ ಮಜಾ ಶಿಬಿರದಲ್ಲಿ 56 ಮಕ್ಕಳು ಪಾಲ್ಗೊಂಡಿದ್ದು ಸಂಸ್ಕೃತಿ ಶಿಕ್ಷಣದೊಂದಿಗೆ ವಿವಿಧ ಕ್ರಿಯಾತ್ಮಕ ಚಟುವಟಿಕೆಗಳನ್ನು ಒಳಗೊಂಡಿತ್ತು. ಪೋಷಕರಾದ ಶ್ರೀ ಪ್ರಕಾಶ ವಾಗ್ಲೆಯವರು ಮಾತನಾಡಿ ಮಗುವಿಗೆ ಒಂದು ಉತ್ತಮ ವೇದಿಕೆಯನ್ನು ಈ ಶಿಬಿರವು ಒದಗಿಸಿಕೊಟ್ಟಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ನಂತರ ಶಿಬಿರಾರ್ಥಿಗಳಿಂದ ಪ್ರಹಸನವನ್ನು ಪ್ರದರ್ಶಿಸಲಾಯಿತು. ಶಿಬಿರಾರ್ಥಿಗಳಾದ ಅಮೃತ್ ವಿ. ಸ್ವಾಗತಿಸಿ ಆದಿತ್ಯ, ಲಹರಿ, ಹರಿಣಿ, ತನ್ಮಯ ವಾಗ್ಲೆ ಶಿಬಿರದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಸಹಶಿಕ್ಷಕಿ ಶ್ರೀಮತಿ ವೀಣಾಕುಮಾರಿ ಶಿಬಿರದ ಕುರಿತು ಮಾತನಾಡಿದರು. ಕು. ವಂಶಿ ಧನ್ಯವಾದ ಸಲ್ಲಿಸಿ, ಕು.ಅಗಮ್ಯ ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ವಸಂತ ಸುವರ್ಣ, ಪ್ರಾಥಮಿಕ ಶಾಲಾ ಮುಖ್ಯಗುರು ನಳಿನಿ ವಾಗ್ಲೆ, ಹಿರಿಯ ಶಿಕ್ಷಕಿ ಶ್ರೀಮತಿ ವೀಣಾ ಸರಸ್ವತಿಯವರು ಉಪಸ್ಥಿತರಿದ್ದರು.

summer vacation (1)

summer vacation (2)

summer vacation (3)

summer vacation (4)

summer vacation (5)

summer vacation (6)

summer vacation

Highslide for Wordpress Plugin