ಅಂತರಾಷ್ಟ್ರೀಯ ಕವನ ಸಂಕಲನಕ್ಕೆ ಆಯ್ಕೆ

24. Vidya Anil Mallarವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಂಗ್ಲಭಾಷಾ ಅಧ್ಯಾಪಕಿಯಾದ ಶ್ರೀಮತಿ ವಿದ್ಯಾ ಅನಿಲ್ ಮಲ್ಲಾರ್‌ರವರ ’ದ ಡಿವೈನ್ ಸೋಲ್ಸ್’ ಎಂಬ ಕವನವು ಅಮೆರಿಕಾದ ಇಂಟರ್‌ನ್ಯಾಶನಲ್ ಪೊಯೆಟ್ರಿ ಪ್ರೆಸ್‌ಬುಕ್‌ನಿಂದ ಪ್ರಕಟವಾಗುವ ‘ಫ್ರಂ ದ ಹಾರ್ಟ್’ ಪತ್ರಿಕೆಯ ವಾರ್ಷಿಕ ಸಂಚಿಕೆಗೆ ಆಯ್ಕೆಯಾಗಿದೆ. ಪತ್ರಿಕೆಯ ಸಂಪಾದಕರು ಈ ಕವಿತೆಯ ಅರ್ಥಗರ್ಭಿತ, ಹೃದಯ ಸ್ಪರ್ಶಿ ರಚನೆಗಾಗಿ ಆರಿಸಿಕೊಂಡಿರುತ್ತಾರೆ. ಇವರ ಈ ಕವನವು ಶಾಲೆಯ ಬೆಳ್ಳಿಹಬ್ಬದ ಸ್ಮರಣ ಸಂಚಿಕೆ ’ಸಮರ್ಪಣಾ’ದಲ್ಲಿ  ಪ್ರಕಟಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Highslide for Wordpress Plugin